ಅನುಷ್ಕಾ-ವಿರಾಟ್ ಮದುವೆ ಸುದ್ದಿಗೆ ಸಿಕ್ತು ತಾಜಾ ಸಾಕ್ಷಿ | Filmibeat Kannada

Filmibeat Kannada 2017-12-08

Views 585

ಬಾಲಿವುಡ್ ಹಾಗೂ ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಒಂದೇ ಸುದ್ದಿ. ಈ ವಾರಾಂತ್ಯಕ್ಕೆ ನಟಿ ಅನುಷ್ಕಾ ಶರ್ಮಾ ಜೊತೆ ಕ್ರಿಕೆಟಿಗ ವಿರಾಟ್ ಕೊಹ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂತ. ಈ ಸುದ್ದಿ ಎಲ್ಲಿಯೂ ಅಧಿಕೃತವಾಗಿ ಹೊರಬಿದ್ದಿಲ್ಲ. ಆದ್ರೆ, ಇದಕ್ಕೆ ಪುಷ್ಠಿ ಕೊಡುವಂತೆ ಬೆಳವಣಿಗೆಗಳು ಮಾತ್ರ ಸದ್ದಿಲ್ಲದೇ ನಡೆಯುತ್ತಿದೆ. ಹೌದು, ಡಿಸೆಂಬರ್ 9 ರಿಂದ 12ರೊಳಗೆ ಇವರಿಬ್ಬರು ಸಪ್ತಪದಿ ತುಳಿಯಲಿದ್ದು, ಅದಕ್ಕಾಗಿ ಇಟಲಿಯಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎನ್ನಲಾಗಿದೆ. ಅದಾದ ಬಳಿಕ ಮುಂಬೈನಲ್ಲಿ ಆರತಕ್ಷತೆ ಆಯೋಜಿಸುವ ಯೋಜನೆ ಹಾಕಿಕೊಂಡಿದ್ದಾರಂತೆ. ಹೀಗಿರುವಾಗ, ನಟಿ ಅನುಷ್ಕಾ ಶರ್ಮಾ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು, ಇಟಲಿಗೆ ಪ್ರಯಾಣ ಬೆಳಸಿದ್ದಾರೆ. ಅನುಷ್ಕಾ ಶರ್ಮಾ ಜೊತೆಯಲ್ಲಿ ತಂದೆ ಅಜಯ್ ಕುಮಾರ್, ತಾಯಿ ಆಶೀಮಾ, ಹಾಗೂ ಸಹೋದರ ಕರ್ನೇಶ್ ಕೂಡ ಇದ್ದರು

With all the buzz about Virat and Anushka getting married this weekend in Italy . Anushka sharma was spotted with her family in Mumbai airpot ready to leave to italy

Share This Video


Download

  
Report form
RELATED VIDEOS