News Cafe | PM Modi Arriving Today On a Two-day Visit To Karnataka | HR Ranganath | June 20, 2022

Public TV 2022-06-20

Views 3

ಇಂದಿನಿಂದ ಪ್ರಧಾನಿ ಮೋದಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಸ್ವಾಗತಕ್ಕೆ ಕರ್ನಾಟಕ ಸಜ್ಜಾಗಿದೆ. ಚುನಾವಣಾ ವರ್ಷದ ಆರಂಭದಲ್ಲಿಯೇ ಮೋದಿ ರಾಜ್ಯಕ್ಕೆ ಬರುತ್ತಿರುವುದು ಬಿಜೆಪಿಗರ ಹುಮ್ಮಸ್ಸನ್ನು ಇಮ್ಮಡಿ ಮಾಡಿದೆ. ಸಿಎಂ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಮೋದಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಈ ಪ್ರವಾಸವನ್ನು ಯಶಸ್ವಿಗೊಳಿಸಲು ಇಡೀ ಸರ್ಕಾರ ಶ್ರಮಿಸ್ತಾ ಇದೆ. ಮೋದಿ 20 ಗಂಟೆಗಳ ರಾಜ್ಯದಲ್ಲಿ ಇರಲಿದ್ದು, ಈ ಅವಧಿಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಯೋಗ ಸೇರಿ 10 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 33ಸಾವಿರ ಕೋಟಿ ವೆಚ್ಚದ 19 ಯೋಜನೆಗಳಿಗೆ ಚಾಲನೆ ಕೊಡಲಿದ್ದಾರೆ. ಇದ್ರಲ್ಲಿ ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ, ಯಶವಂತಪುರ ಮತ್ತು ದಂಡು ರೈಲ್ವೇ ನಿಲ್ದಾಣದ ಅಭಿವೃದ್ಧಿಯೂ ಸೇರಿದೆ. ಸಂಜೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಫಲಾನುಭವಿಗಳ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ. ನಂತರ ಸುತ್ತೂರುಮಠ, ಚಾಮುಂಡಿ ಬೆಟ್ಟಕ್ಕೂ ಪ್ರಧಾನಿ ಭೇಟಿ ನೀಡ್ತಿದ್ದಾರೆ. ಮೋದಿ ಸಂಚರಿಸುವ ಮಾರ್ಗದ ಎಲ್ಲಾ ಕಾಲೇಜುಗಳಿಗೆ, ಬೆಂಗಳೂರು ವಿವಿಗೆ ರಜೆ ಘೋಷಣೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಉನ್ನತ ಶಿಕ್ಷಣ ಇಲಾಖೆ ಈ ಆದೇಶ ಹೊರಡಿಸಿದೆ. ನಿನ್ನೆ ತಡರಾತ್ರಿ ಸಿಎಂ ಕೊಮ್ಮಘಟ್ಟಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ದತೆಗಳನ್ನು ಪರಿಶೀಲಿಸಿದ್ರು. ಅತ್ತ, ಮೈಸೂರಿನಲ್ಲಿ ಜಿಲ್ಲಾಡಳಿತ ಸಹ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಮೋದಿ ಕಾರ್ಯಕ್ರಮದ ಭದ್ರತೆಗಾಗಿಯೇ ಸುಮಾರು 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

#publictv #newscafe #hrranganath #pmmodi

Share This Video


Download

  
Report form
RELATED VIDEOS